ಶಿವರಾಜ ತಂಗಡಗಿ ಸಚಿವ ಸ್ಥಾನಕ್ಕೆ ಭೋವಿ–ವಡ್ಡರ ಸಮಾಜದ ಸಂಭ್ರಮ; ಸಿಹಿ ಹಂಚಿ ವಿಜಯೋತ್ಸವ

ಕಲಬುರಗಿ: ರಾಜ್ಯ ಸಚಿವ ಸಂಪುಟದಲ್ಲಿ ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಭೋವಿ–ವಡ್ಡರ ಸಮಾಜದ ವತಿಯಿಂದ ನಗರದ ಬ್ರಹ್ಮಪುರ ವಡ್ಡರಗಲ್ಲಿಯ ಭಗತ್ಸಿಂಗ್ ಚೌಕ ಬಡಾವಣೆಯಲ್ಲಿ ಸೋಮವಾರ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.
ಈ ವೇಳೆ ಸಮಾಜದ ಮುಖಂಡರು ಮಾತನಾಡಿ, ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ದೊರೆತಿರುವುದು ಭೋವಿ–ವಡ್ಡರ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಸಚಿವರಾಗಿ ಅವರು ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಾಗೂ ಸಮಾಜದ ಕಲ್ಯಾಣಕ್ಕಾಗಿ ಪರಿಣಾಮಕಾರಿ ಸೇವೆ ಸಲ್ಲಿಸಲಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿ ಶುಭ ಹಾರೈಸಿದರು.
ವಿಜಯೋತ್ಸವದ ಅಂಗವಾಗಿ ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದ ಸಮಾಜದ ಸದಸ್ಯರು, ಸಚಿವ ಸ್ಥಾನ ಲಭಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಭೀಮಶಂಕರ್ ಬಂಕೂರ್, ರಾಜು ಎಂ. ಪುರೆ, ತಿಮ್ಮಣ್ಣ ಜಾದವ್, ಬಸವರಾಜ್ ಇಂಚಲಗಿ, ರಾಘವೇಂದ್ರ ಲಸ್ಕರಿ, ಶಿವಕುಮಾರ ಎಂ. ಪುರೆ, ದೀಪಕ್, ಪಪ್ಪು, ನೀಲಕಂಠ, ಸಿದ್ದಮ್ಮ ಸೇರಿದಂತೆ ಭೋವಿ–ವಡ್ಡರ ಸಮಾಜದ ಹಿರಿಯ ಮುಖಂಡರು, ಯುವಕರು ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು



