ಮೂರನೇ ಬಾರಿಗೆ ವಿಧಾನ ಪರಿಷತ್ಗೆ ಆಯ್ಕೆಯಾದ ತಿಪ್ಪಣ್ಣಪ್ಪ ಕಮಕನೂರಿಗೆ ಗೃಹ ಸನ್ಮಾನ

ಸುರಪುರ: ವಿಧಾನ ಪರಿಷತ್ತಿಗೆ ಮೂರನೇ ಬಾರಿಗೆ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಶ್ರೀ ತಿಪ್ಪಣ್ಣಪ್ಪ ಕಮಕನೂರು ಅವರನ್ನು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಕಲಬುರಗಿ ವಿಭಾಗದ ಉಪಾಧ್ಯಕ್ಷ ಪಿಡ್ಡಪ್ಪ ಜಾಲಗಾರ ಸುರಪುರ ಅವರ ನೇತೃತ್ವದಲ್ಲಿ ಗೃಹ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮವನ್ನು ಸ್ವಾಗತ ಗೀತೆಯ ಮೂಲಕ ಆರಂಭಿಸಲಾಯಿತು. ಬಳಿಕ ನಿವೃತ್ತ ಪ್ರಾಂಶುಪಾಲ ಎಸ್.ಡಿ. ಕಟ್ಟಿಮನಿ ಅವರು ತಿಪ್ಪಣ್ಣಪ್ಪ ಕಮಕನೂರು ಅವರ ರಾಜಕೀಯ ಜೀವನ ಹಾಗೂ ಅವರು ನಡೆದು ಬಂದ ಹಾದಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಮಕನೂರು ಅವರು ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಅನುಭವ ಹೊಂದಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಗಂಗಾಧರ ಸುರಪುರ ನಿರೂಪಿಸಿದರು. ಬಾಲಕೃಷ್ಣ ಸಲವಡಗಿ, ವೆಂಕಟೇಶ ಆದವಾನಿ, ವಿಜಯಕುಮಾರ ಬೈಚಬಾಳ, ತೇನಸಿಂಗ ಹಜಾರೆ, ವೆಂಕಟೇಶ ಕುಲಕರ್ಣಿ, ಪಾಪಣ್ಣ ಇಟಗೀಕರ, ಲಕ್ಷ್ಮೀನಾರಾಯಣ ಜಾಲಗಾರ ಸುರಪುರ, ಬಾಬುರಾವ ಕುಲಕರ್ಣಿ ಸೇರಿದಂತೆ ಹಲವು ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.ಕೊನೆಯಲ್ಲಿ ನಾಗರಾಜ ಸುರಪುರ ವಂದನಾರ್ಪಣೆ ಮಾಡಿದರು.



