ಜಿಲ್ಲಾಸುದ್ದಿಗಳು

ಗ್ರಾಮ ಮಟ್ಟದಿಂದ ಸಂಘಟನೆ ಬಲಪಡಿಸಲು ದಲಿತ ಸಂಘರ್ಷ ಸಮಿತಿ ಭೀಮಮಾರ್ಗ ಸಂಕಲ್ಪ

ಕಲಬುರಗಿ: ದಲಿತ ಸಂಘರ್ಷ ಸಮಿತಿ (ಭೀಮಮಾರ್ಗ) ಜಿಲ್ಲಾ ಸಮಿತಿ, ಕಲಬುರಗಿ ನೇತೃತ್ವದಲ್ಲಿ ಜಿಲ್ಲಾ ಪದಾಧಿಕಾರಿಗಳ ಸಭೆ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ನಡೆಯಿತು.

ರಾಜ್ಯ ಸಂಚಾಲಕರಾದ ಡಾ. ಬಿ.ಎನ್. ವೆಂಕಟೇಶ ಹಾಗೂ ಸಮಿತಿ ಅಧ್ಯಕ್ಷ ಸಿದ್ದಾರ್ಥ ಸಿಂಗೆ ಅವರ ನಿರ್ದೇಶನದಂತೆ ನಡೆದ ಸಭೆಯಲ್ಲಿ, ಸಂಘಟನೆಯನ್ನು ಗ್ರಾಮ ಮಟ್ಟದಿಂದ ಮತ್ತಷ್ಟು ಬಲಪಡಿಸುವುದು, ಸಮಾಜದ ಹಕ್ಕುಗಳ ರಕ್ಷಣೆಗಾಗಿ ಹೋರಾಟವನ್ನು ತೀವ್ರಗೊಳಿಸುವುದು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಂಘಟನೆಯನ್ನು ಸಶಕ್ತಗೊಳಿಸುವ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ವಿವಿಧ ತಾಲೂಕುಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಅವರಿಗೆ ಸಂಘಟನಾ ಜವಾಬ್ದಾರಿಗಳನ್ನು ವಹಿಸಲಾಯಿತು. ಸಂಘಟನೆಯ ಚಟುವಟಿಕೆಗಳನ್ನು ತಳಮಟ್ಟಕ್ಕೆ ವಿಸ್ತರಿಸುವ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಪದಾಧಿಕಾರಿಗಳಿಗೆ ಕರೆ ನೀಡಲಾಯಿತು.

ಸಭೆಯಲ್ಲಿ ರಾಜ್ಯ ಸಂಚಾಲಕ ಹಾಗೂ ಆಡಳಿತಾಧಿಕಾರಿ ಸಂಜೀವ ಕಾಂಬಳೆ, ರಾಜ್ಯ ಸಂಚಾಲಕ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಡಾ. ಈರಣ್ಣ ಎಂ. ಕಸನ, ಜಿಲ್ಲಾ ಸಂಚಾಲಕ ಕೈಲಾಶ ದೊಡ್ಡಮ್ಮನಿ, ನಗರ ಘಟಕದ ಸಂಚಾಲಕ ಕಾಶಿನಾಥ ಹುಡಗಿ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಸಿದ್ಧಾರ್ಥ ಗಿರಿ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ಕಿರಣ್, ಜಿಲ್ಲಾ ಸಂಚಾಲಕಿ ಸುನೀತಾ ನಂದೂರಕರ, ಜಿಲ್ಲಾ ಸಹ ಸಂಚಾಲಕ ಗುಂಡುರಾವ್ ನಂದೂರಕರ, ವಿಜಯಪುರ ಜಿಲ್ಲಾ ಸಂಚಾಲಕ ವಿಜಯಕುಮಾರ್ ಅರಕೇರಾ, ಜಿಲ್ಲಾ ಸಹ ಸಂಚಾಲಕಿ ಅನುರಾಧ ಕಾಂಬಳೆ, ಅನುತಾ ದೊಡ್ಡಮ್ಮನಿ, ತಾಲೂಕು ಸಂಚಾಲಕ ಮಾರುತಿ ಕಾಂಬಳೆ, ಸೇಡಂ ಸಂಚಾಲಕ ಮೇಘನಾಥ ದುಗ್ಗನ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಭೆಯ ಅಂತ್ಯದಲ್ಲಿ ಸಂಘಟನೆಯ ಬಲವರ್ಧನೆಗಾಗಿ ಎಲ್ಲ ಪದಾಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಸಮಾಜದ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button