ಕಲಬುರಗಿಜಿಲ್ಲೆ ಸುದ್ದಿ

ಶರಣ-ಸೂಫಿ ಸಂತರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಕೊರಣೆಶ್ವರ ಸ್ವಾಮೀಜಿ

ಶಿಕ್ಷಕಿ ಪ್ರಭಾವತಿ ಇಮ್ಮಣಿ ಅವರ ಕೃತಿಗಳ ಬಿಡುಗಡೆ

ಜೇವರ್ಗಿ, ಸೆ.10: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಶರಣರು ಹಾಗೂ ಸೂಫಿ ಸಂತರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಆಳಂದದ ತೋಂಟದಾರ್ಯ ಅನುಭವ ಮಂಟಪದ ಕೊರಣೆಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಮಹಾಲಕ್ಷ್ಮಿ ಮಹಿಳಾ ಪದವಿ ಕಾಲೇಜಿನಲ್ಲಿ ಶಿಕ್ಷಕಿ ಪ್ರಭಾವತಿ ಜಗನ್ನಾಥ ಇಮ್ಮಣಿ ಅವರ ‘ಅಮ್ಮ ಎಂದರೆ ಅದ್ಭುತ’, ‘ಮನದ ದೀವಿಗೆ’ ಹಾಗೂ ‘ಕರಿದ ಕಾವ್ಯ’ ಸೇರಿದಂತೆ ಕೃತಿಗಳ ಲೋಕರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪುಸ್ತಕ ಬರೆಯುವುದು ಮತ್ತು ಅದನ್ನು ಮುದ್ರಿಸಿ ಹೊರತರುವುದು ಸುಲಭದ ಕೆಲಸವಲ್ಲ. ಅದೊಂದು ಸಾಧನೆಯೇ ಸರಿ. ಶ್ರಮವಹಿಸಿ ಇಂತಹ ಕೃತಿಗಳನ್ನು ಹೊರತರುವ ಲೇಖಕರಿಗೆ ಓದುಗರು ಪುಸ್ತಕಗಳನ್ನು ಓದುವ ಮೂಲಕ ಪ್ರೋತ್ಸಾಹ ನೀಡಬೇಕು. ಪುಸ್ತಕ ಓದುವ ಸಂಸ್ಕೃತಿ ಇಂದಿನ ಯುವಜನರಲ್ಲಿ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ. ಓದುಗರೇ ಲೇಖಕರಿಗೆ ನೀಡಬಹುದಾದ ದೊಡ್ಡ ಕೊಡುಗೆ ಹಾಗೂ ಗೌರವ ಎಂದು ಹೇಳಿದರು.

ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ನರಿಬೋಳ ಅವರು ಕೃತಿಗಳನ್ನು ಬಿಡುಗಡೆ ಮಾಡಿದರು. ಸೋನಲ್ ಕಾಲೇಜಿನ ಪ್ರಾಚಾರ್ಯ ಸದಾನಂದ ಪಾಟೀಲ ಅವರು ಕೃತಿಗಳ ಪರಿಚಯ ಮಾಡಿಕೊಟ್ಟರು.

ಸಂಸ್ಥೆಯ ಅಧ್ಯಕ್ಷೆ ಮಂಜುಳಾ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಪ್ರಭಾವತಿ ಇಮ್ಮಣಿ ನೇತೃತ್ವ ವಹಿಸಿದ್ದರು. ಪ್ರಾಚಾರ್ಯ ಡಾ. ಧರ್ಮಣ್ಣ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಸಿ.ಎಸ್. ಆನಂದ, ವಿಜಯಕುಮಾರ ಪರುತೆ ಹಾಗೂ ಶರಣಗೌಡ ಪಾಟೀಲಪಾಳಾ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗೊಲ್ಲಾಳಪ್ಪ ಯಾತನೂರ, ಮಹಾಂತಯ್ಯ ಹಿರೇಮಠ, ಶರಣಗೌಡ ಪಾಟೀಲ ಯಲಗೋಡ, ಗುರುಲಿಂಗಪ್ಪಗೌಡ ಮಾಲಿಪಾಟೀಲ, ಶಿವಶರಣಪ್ಪ ಹಳಿಮನಿ, ರಾಜಕುಮಾರ ತುಂಬಡ, ವೆಂಕಟರಾವ್ ಮುಜುಮದಾರ, ಶಿವಾನಂದ ದ್ಯಾಮಗೊಂಡ, ಶ್ರೀಹರಿ ಕರಕಿಹಳ್ಳಿ, ಬಸವರಾಜ ಚಿನಗುಡಿ, ಭಗವಂತರಾಯ ಬೇಟಣ್ಣೂರ, ಅನೀಲ ಬಿರಾದಾರ, ಅಮೀನಪ್ಪ ಹೊಸಮನಿ, ಈಶ್ವರ ಹಿಪ್ಪರಗಿ, ವೀರಯ್ಯ ಹಿರೇಮಠ, ಲಕ್ಷ್ಮೀಕಾಂತ ಕುಲಕರ್ಣಿ, ಜಗದೀಶ ಉಕನಾಳ, ಲಿಂಗರಾಜ ಹಿರೇಗೌಡ, ಸಾಹೇಬಗೌಡ ಹರನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುರೇಶ ಹಿರೇಮಠ ಸ್ವಾಗತಿಸಿದರು. ಮಲ್ಲಿಕಾರ್ಜುನ ನೇದಲಗಿ ನಿರೂಪಿಸಿದರು. ಸಾವಿತ್ರಿ ಮನಗೂಳಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button