ಕಲಬುರಗಿಚಿತ್ರ ಸುದ್ದಿ
ಶ್ರಾವಣ ಮಾಸದ ಮುಕ್ತಾಯ: ಕನ್ನಡ ನಾಡು ರಕ್ಷಣಾ ಪಡೆ ವತಿಯಿಂದ ಮಹಾಪ್ರಸಾದ ವಿತರಣೆ

ಕಲಬುರಗಿ: ಶ್ರಾವಣ ಮಾಸದ ಮುಕ್ತಾಯದ ಪ್ರಯುಕ್ತ ಕನ್ನಡ ನಾಡು ರಕ್ಷಣಾ ಪಡೆ ಕಲಬುರಗಿ ವತಿಯಿಂದ ನಗರದ ರಾಮ ಮಂದಿರ ಸರ್ಕಲ್ನಲ್ಲಿ ಮಹಾಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.
ಸಮಾಜ ಸೇವಕರು ಹಾಗೂ ಕನ್ನಡ ನಾಡು ರಕ್ಷಣಾ ಪಡೆಯ ರಾಜ್ಯ ಉಪಾಧ್ಯಕ್ಷ ಗಜಾನಂದ ದೇಶಪಾಂಡೆ ಅವರ ಸಹಕಾರದಲ್ಲಿ ಸಾರ್ವಜನಿಕರಿಗೆ ಮಹಾಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಜಾನಂದ ದೇಶಪಾಂಡೆ, ಶ್ರಾವಣ ಮಾಸದ ಧಾರ್ಮಿಕ ಆಚರಣೆಗಳ ಅಂಗವಾಗಿ ಸಾರ್ವಜನಿಕರಿಗೆ ಪ್ರಸಾದ ವಿತರಿಸುವ ಮೂಲಕ ಸೌಹಾರ್ದತೆ ಹಾಗೂ ಸೇವಾ ಮನೋಭಾವ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ನಾಡು ರಕ್ಷಣಾ ಪಡೆಯ ಜಿಲ್ಲಾ ಅಧ್ಯಕ್ಷ ವಿನೋದ ಎಂ. ಪಾಟೀಲ, ಸಚಿನ್, ನಿತಿನ್, ಲಕ್ಷ್ಮಿಕಾಂತ್, ರಮೇಶ್, ಪವನ ಉದನೂರು, ಗುರುರಾಜ ಕೊರೆಳಿ, ಶೇಖರ್, ಕಾರ್ತಿಕ್, ಶಶಿ ವಗೆ, ಶರಣು, ಅಖಿಲ್, ಮೊಬಿನ್, ದೀಪಕ್, ಶರಣು ಹಾಗೂ ಎಸ್.ಕೆ. ಸೇರಿದಂತೆ ಹಲವರು ಪಾಲ್ಗೊಂಡಿದ್ದರು.



