ಯಾದಗಿರಿ

ಕೆಂಭಾವಿ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ

ಕೆಂಭಾವಿ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯ ವತಿಯಿಂದ ಪಟ್ಟಣದಲ್ಲಿ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರಿಗೆ ಸುರಕ್ಷತಾ ಕಿಟ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೇಖ್ ಮುಬಾರಕ್ ಮಾತನಾಡಿ, ಕಟ್ಟಡ ಕಾಮಗಾರಿ ವೇಳೆ ಕಾರ್ಮಿಕರ ಜೀವ ರಕ್ಷಣೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಕೆಲಸದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಹೆಲ್ಮೆಟ್, ಗ್ಲೌಸ್, ಸುರಕ್ಷತಾ ಬೂಟು ಸೇರಿದಂತೆ ಇಲಾಖೆ ಒದಗಿಸುವ ಸುರಕ್ಷತಾ ಸಾಧನಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸಲಹೆ ನೀಡಿದರು.

ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಅರ್ಹ ಕಾರ್ಮಿಕರಿಗೆ ಸುರಕ್ಷತಾ ಸಲಕರಣೆಗಳ ಕಿಟ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘಟನೆಯ ಸಹ ಪ್ರಧಾನ ಕಾರ್ಯದರ್ಶಿ ಮುರ್ತುಜಾ ಸುರಪುರ, ಖಜಾಂಚಿ ಹುಸೇನಿ ಸಾಬ್ ಜೆ.ಕೆ., ಸಹ ಖಜಾಂಚಿ ಮೊಹಮದ್ ಇಬ್ರಾಹಿಂ ಹಾಗೂ ಸಂಚಾಲಕ ಖಾಜಾ ಮೇಸ್ತ್ರಿ ಉಪಸ್ಥಿತರಿದ್ದರು.

ಖಲೀಲ್ ಹುನ್ಚಲಾ, ಮೊಹಮ್ಮದ್ ನಾಯ್ಕೋಡಿ, ಅಬ್ದುಲ್ ಖಾದಿರ್, ಮೆಹಬೂಬ್ ಎಲ್., ಮಹಿಬೂಬ್ ಎಸ್., ಮಾಸುಮ್ ಎಂ., ಮೊಹಮ್ಮದ್ ರಫೀಕ್ ಮುಲ್ಲಾ, ಮೊಹಮ್ಮದ್ ರಫೀಕ್ ಎಸ್., ಹನುಮಂತರಾಯ, ರಾಜು ಕುರೇಶಿ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button