ಜಿಲ್ಲೆ ಸುದ್ದಿಯಾದಗಿರಿ

ಮೂರು ದಶಕಗಳ ಸಾಹಿತ್ಯ ಸೇವೆಗೆ ‘ಸಾಧಕ ರತ್ನ’ ಗೌರವ

ಕೆಂಭಾವಿ: ಪರಸನಹಳ್ಳಿ ಗ್ರಾಮದ ಖ್ಯಾತ ಸಾಹಿತಿ ಹಾಗೂ ಸಂಶೋಧಕ ನಿಂಗನಗೌಡ ಹ. ದೇಸಾಯಿ (ಹನಿ ದೇಸಾಯಿ ಪರಸನಹಳ್ಳಿ) ಅವರ ಮೂರು ದಶಕಗಳ ಸಾಹಿತ್ಯ ಹಾಗೂ ಸಂಶೋಧನಾ ಸೇವೆಯನ್ನು ಗುರುತಿಸಿ, ಕಲಬುರ್ಗಿಯ ಡಾ. ರಾಜಕುಮಾರ್ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಲಾಸಂಘವು ‘ಸಾಧಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.

ಕಲಬುರ್ಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 5ನೇ ವರ್ಷದ ‘ಶಿಕ್ಷಕರ ಉತ್ಸವ–2026’ ಸಮಾರಂಭದಲ್ಲಿ ಭಾನುವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಹಾಗೂ ಚಲನಚಿತ್ರ ನಿರ್ದೇಶಕ ಅಮರಪ್ರಿಯ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು.

ಸಂಘದ ಗೌರವ ಕಾರ್ಯದರ್ಶಿ ಡಾ. ವಿಜಯಕುಮಾರ್ ಗೋತಗಿ, ಅಧ್ಯಕ್ಷ ರಮೇಶ ಯಾಳಗಿ, ಸಾಹಿತಿ ನಾಗೇಂದ್ರಪ್ಪ ಮಾಡ್ಯಾಳ, ಪ್ರಾಂಶುಪಾಲ ಡಾ. ನೀಲಕಂಠ ಟಿ. ಕಣ್ಣಿ, ರಮಾದೇವಿ ಬಿ. ದುಗನೂರ, ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನಿತಿನ್ ಭೀಮರಾವ್ ತೇಗಲತಿಪ್ಪಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ನೂರಾರು ಶಿಕ್ಷಕರು, ಸಾಹಿತಿಗಳು ಹಾಗೂ ಕಲಾವಿದರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button