ಜಿಲ್ಲಾಸುದ್ದಿಯಾದಗಿರಿ

ಯಾದಗಿರಿಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ: ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಂಭ್ರಮ

ಯಾದಗಿರಿ: ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾದಗಿರಿ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ₹100 ಕೋಟಿ ಅನುದಾನ ಘೋಷಣೆ ಮಾಡಿರುವುದನ್ನು ಸ್ವಾಗತಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ನೇತೃತ್ವದಲ್ಲಿ ನಗರದ ಚಿತ್ತಾಪುರ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಲಾಯಿತು.

ಇದೇ ವೇಳೆ ರಾಜ್ಯದ ಮಕ್ಕಳ ಹಾಗೂ ಪೋಷಕರ ಹಿತದೃಷ್ಟಿಯಿಂದ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬಳಕೆಗೆ ನಿಷೇಧ ಮಾಡುವ ಸರ್ಕಾರದ ನಿರ್ಧಾರವನ್ನೂ ಸ್ವಾಗತಿಸಲಾಯಿತು. ಬಳಿಕ ದೇವಸ್ಥಾನದಲ್ಲಿ ಪರಸ್ಪರ ಸಿಹಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಬಸವರಾಜಯ್ಯ ಸ್ವಾಮಿ, ಶರಣುಗೌಡ ಪಾಟೀಲ್, ಶಿವಶರಣ ಭೀಮಾಶಂಕರ, ಲಕ್ಷ್ಮಣ ಚೌಹಾಣ್, ಹಣಮಂತ ನಾಗರೆಡ್ಡಿ ಪಾಟೀಲ್, ಶರಣಗೌಡ, ಬಸವರಾಜಪ್ಪ ಗೌಡ, ಚಂದ್ರಶೇಖರ ತಂಬಾಕೆ, ನಾಗೇಂದ್ರಪ್ಪ, ವೀರರೆಡ್ಡಿ, ಸಾಬಯ್ಯ ಗುತ್ತೇದಾರ್, ದಶರಥ ಎಂ, ಜಮಾಲ್, ರಫೀಕ್, ಖಾಜಾ ನಹೀಮ್, ನಾಭಿ, ಜಾಕೀರ್, ಗೌಸ್, ಮರ್ಲಿಂಗ, ಸಲೀಮ್, ಶಿವಶರಣಪ್ಪ ಕುಂಬಾರ, ಮಲ್ಲಯ್ಯ ಮುಸ್ತೂರ್, ಈಶ್ವರ್ ನಾಯಕ್, ಆಶಪ್ಪ ಜಟ್ಟಿ, ಅಂಬುಜಿ ರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button