ಕಲಬುರಗಿಜಿಲ್ಲಾಸುದ್ದಿ

ಜುಲೈ 7ರ ಒಳಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಿ : ಮಾಳಿಂಗರಾಯ ಸುಗೂರ

90% ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಜೇವರ್ಗಿ: ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘ ಕಲಬುರಗಿ ಹಾಗೂ ಕಲಬುರಗಿ ಕುರುಬಗೊಂಡ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ 2026-27ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜುಲೈ ತಿಂಗಳಲ್ಲಿ ಆಯೋಜಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ 90 ಪ್ರತಿಶತಕ್ಕಿಂತ ಹೆಚ್ಚು ಅಂಕ ಗಳಿಸಿರುವ ಕುರುಬ ಸಮಾಜದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುರುಬಗೊಂಡ ನೌಕರರ ಸಂಘದ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕು ಅಧ್ಯಕ್ಷರಾದ ಮಾಳಿಂಗರಾಯ ಸುಗೂರ ಹಾಗೂ ಸಿದ್ದು ಪೂಜಾರಿ ಯಾಳವಾರ ಅವರು, ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಜುಲೈ 5ರೊಳಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು.

ಕುರುಬ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಹಾಗೂ ಇತರೆ ದಾಖಲೆಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸಬೇಕು ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಮಾಳಿಂಗರಾಯ ಸುಗೂರ (9449834000) ಹಾಗೂ ಸಿದ್ದು ಪೂಜಾರಿ ಯಾಳವಾರ (9902658258) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಬೈಲಪ್ಪ ನೆಲೋಗಿ, ನಿಂಗಣ್ಣ ಬಂಡಾರಿ, ಡಿ.ಬಿ. ಪಾಟೀಲ್, ಎಸ್.ಎಸ್. ಮಾಲಿ ಬಿರಾದಾರ್, ಮಲ್ಲು ಕುಳಗೇರ, ಭೂತಳಿ ಹಾಲಗಡ್ಲಾ, ಬಸವರಾಜ ಬಾಗೇವಾಡಿ, ಸಂತೋಷ್ ಮಲ್ಲಬಾದ್, ಈರಣ್ಣ ಸಾತಖೇಡ್, ನಿಂಗಣ್ಣ ಆಂದೋಲ, ಬಂಗಾರಪ್ಪ ಆಡಿನ, ಸಿದ್ದು ಹಂದನೂರು, ಸಾಯಬಣ್ಣ ಕಾಸರಬೋಸಗ, ನಿಂಗಣ್ಣ ರದ್ದೇವಾಡಗಿ, ಮಲ್ಲು ಮುತ್ತಕೋಡ, ಶರಣು ಕಲ್ಲಹಂಗಾರಗ, ಎಂ.ಎಸ್. ಸೊನ್ನದ್ (ವಕೀಲರು), ಲಕ್ಕಪ್ಪ ಕೂಟನೂರು, ಲಿಂಗರಾಜ ಮಾಸ್ತರ, ಪ್ರಕಾಶ್ ಪಿಡಿಒ, ಶರಣು ನೆರಡಗಿ, ಸೂರ್ಯಕಾಂತ ಬಂಡಿ, ಆಜುತಪ್ಪ ವಡೆಯರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button