ಚಿತ್ರ ಸುದ್ದಿ

ಜೇವರ್ಗಿ ನ್ಯಾಯಾಲಯದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ

ಜೇವರ್ಗಿ: ಪಟ್ಟಣದ ತಾಲೂಕು ನ್ಯಾಯಾಲಯದ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.

ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶೆ ತೈಯಬ ಸುಲ್ತಾನ್ ಅವರು ಧ್ವಜಾರೋಹಣ ನೆರವೇರಿಸಿದರು. ಸಿವಿಲ್ ನ್ಯಾಯಾಲಯದ ಕಿರಿಯ ಶ್ರೇಣಿ ನ್ಯಾಯಾಧೀಶ ಕಾಶೀನಾಥ್ ಉಪ್ಪಾರ್ ಉಪಸ್ಥಿತರಿದ್ದರು.

ವಕೀಲರ ಸಂಘದ ಅಧ್ಯಕ್ಷ ಶಾಂತರಾಜ್ ಪಾಟೀಲ್, ಕಾರ್ಯದರ್ಶಿ ರಾಜಶೇಖರ್ ಶಿಲ್ಪಿ, ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ್ ಪೂಜಾರಿ ಹಾಗೂ ಖಜಾಂಚಿ ಅಶೋಕ್ ಜೀರ ಸೇರಿದಂತೆ ಹಿರಿಯ ನ್ಯಾಯವಾದಿಗಳಾದ ಜೆ.ವಿ. ಹತ್ತಿ, ಕೆ.ಇ. ಬಿರಾದಾರ್, ಬಸವರಾಜ್ ಕೊಂಬಿನ, ಪ್ರಾಣೇಶ್ ಕುಲಕರ್ಣಿ ಹಾಗೂ ವಕೀಲರಾದ ಬೆಣ್ಣೆಪ್ಪ ಕೊಂಬಿನ, ಅಪ್ಪಸಾಹೇಬ್ ಕೊಳಕೂರ, ಅಮಾತ್ಯಪ್ಪ ಮುದ್ದ, ರಾಮನಾಥ ಬಂಡಾರಿ, ರಾಜು ಮುದ್ದಡಗಿ, ಮಲ್ಲಿಕಾರ್ಜುನ್ ಸೊನ್ನದ, ಶರಣು ನೆಲೋಗಿ, ರಾಜಕುಮಾರ್ ಹಂಗರಗಿ ಭಾಗವಹಿಸಿದ್ದರು.

ನ್ಯಾಯಾಲಯದ ಸಿಬ್ಬಂದಿ ಹಾಗೂ ಇತರ ವಕೀಲರು ಉಪಸ್ಥಿತರಿದ್ದು, ಪರಸ್ಪರ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button