ಶರಣ ದಂಪತಿಗಳಿಗೆ ‘ದಂಪತಿ ದರ್ಪಣ’ ಗೌರವ ಪುರಸ್ಕಾರ

ಕಲಬುರಗಿ: ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ 13ನೇ ವರ್ಷಾಚರಣೆ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಅಕಾಡೆಮಿ ವತಿಯಿಂದ ನಗರದ ಕನ್ನಡ ಭವನದಲ್ಲಿ ಸೆ.20ರಂದು ಬೆಳಿಗ್ಗೆ 11.15ಕ್ಕೆ ‘ಶರಣತತ್ವ ಚಿಂತನ ಸಮಾವೇಶ’ ಎಂಬ ವೈಚಾರಿಕ ವಿಶ್ವದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರು ತಿಳಿಸಿದ್ದಾರೆ.
ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ಬಸವಾದಿ ಶರಣರ ತತ್ವಗಳು ಮನುಷ್ಯನ ದೈನಂದಿನ ಬದುಕಿಗೆ ದಾರಿದೀಪವಾಗಿದ್ದು, ಮೌಲ್ಯಾಧಾರಿತ ಜೀವನಕ್ಕೆ ಪ್ರೇರಣೆಯಾಗಿವೆ. ಶರಣರು ತಮ್ಮ ಅನುಭವದ ಮೂಲಕ ವಚನಗಳನ್ನು ರಚಿಸಿ, ಕಾಯಕದ ಮೂಲಕ ಬದುಕು ಕಟ್ಟಿಕೊಂಡಿದ್ದರು. ಎಲ್ಲ ಜನಾಂಗದವರನ್ನು ಪ್ರೀತಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು. ಇಂದಿನ ಯುವಜನತೆಯಲ್ಲಿ ಶರಣರ ಸಂದೇಶವನ್ನು ಬಿತ್ತುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಹಿರಿಯ ಸಾಹಿತಿ ಡಾ. ಕೆ.ಎಸ್. ನಾಯಕ ಸಮಾವೇಶ ಉದ್ಘಾಟಿಸಲಿದ್ದು, ಮಾಜಿ ಮೇಯರ್ ವರ್ಷಾ ರಾಜೀವ್ ಜಾನೆ, ಮಣೂರ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರೂಕ್ ಮಣೂರ, ಸಾಹಿತಿಗಳಾದ ಡಾ. ಜಗನ್ನಾಥ ತರನಳ್ಳಿ ಹಾಗೂ ಮುಡುಬಿ ಗುಂಡೇರಾವ್, ಹಿರಿಯ ಪತ್ರಕರ್ತ ಕಾಶೀನಾಥ ಗುತೇದಾರ್ ಚಿತ್ತಾಪುರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಕಸಾಪ ಪ್ರತಿನಿಧಿ ಸೈಯದ್ ನಜರುದ್ದೀನ್ ಮುತವಲ್ಲಿ, ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ ಹಾಗೂ ಶರಣರಾಜ ಛಪ್ಪರಬಂದಿ ಉಪಸ್ಥಿತರಿರುವರು.
ಆದರ್ಶ ಶರಣ ದಂಪತಿಗಳಿಗೆ ‘ದಂಪತಿ ದರ್ಪಣ’ ಗೌರವ
ಶರಣರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಬದುಕು ನಡೆಸುತ್ತಿರುವ ದಂಪತಿಗಳನ್ನು ಗುರುತಿಸಿ ‘ದಂಪತಿ ದರ್ಪಣ ಗೌರವ ಪುರಸ್ಕಾರ’ ನೀಡಿ ಸತ್ಕರಿಸಲಾಗುವುದು.
ಕಾವೇರಿ ಡಾ. ಶರಣಬಸಪ್ಪ ಕಾರಭಾರಿ, ಭಾಗ್ಯಶ್ರೀ ಹನುಮಗೌಡ, ಜ್ಯೋತಿ ಲಕ್ಷ್ಮೀ ಸಂಜುಶೆಟ್ಟಿ, ಗಿರಿಜಾ ರುದ್ರಗೌಡ ಪಾಟೀಲ, ಸಂಗೀತಾ ಚಂದ್ರಶೆಟ್ಟಿ ಕಾಡಾದಿ, ಸುಷ್ಮಾವತಿ ಡಾ. ಶರಣು ಹೊನ್ನಗೆಜ್ಜೆ, ನೀಲಮ್ಮ ಸುನೀಲ್ ವಾಡಿ ಹಾಗೂ ಸಂಗಮಾ ರೇವಣಸಿದ್ದಯ್ಯ ಮಠ ಅವರನ್ನು ಗೌರವಿಸಲಾಗುವುದು.
‘ಕಾಯಕ ರತ್ನ’ ಗೌರವ ಪುರಸ್ಕಾರ
ಕಾಯಕದ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹೇಶಕುಮಾರ ಭಾವಿಕಟ್ಟಿ, ಜಗನ್ನಾಥ ಬಂಡಿ, ಜೈದೀಪ್ ಅಡವಿರಾಜ ಕೊಡ್ಲಿ, ಗುರುಬಸಪ್ಪ ಪಾಟೀಲ, ಪಂಡಿತ ಗೋವಿನ ಸರಸಂಬಾ, ಸಿದ್ದಲಿಂಗೇಶ್ವರ ಕೊನೆಕ್, ಶಿವರಾಜ ಮಾಲಿಪಾಟೀಲ ತೇಗಲತಿಪ್ಪಿ, ಶಾಂತಾಬಾಯಿ ಹಿರೇಮಠ, ಡಾ. ಮಾಲಿನಿ ಡೇರೇದ, ನಿಂಗನಗೌಡ ಪಾಟೀಲ ಯಲಗೋಡ, ಭಾಗ್ಯಶ್ರೀ ಪಾಟೀಲ ಕಲ್ಲಹಂಗರಗಾ, ಮಲ್ಲಿಕಾರ್ಜುನ ನೆಲೂರ್, ಎ.ಆರ್. ದತ್ತಾ, ಅಮರೇಶ್ವರ ನೂಲಾ, ನಾಗೇಂದ್ರಪ್ಪ ದಂಡೋತಿಕರ್ ಹಾಗೂ ರಾಜೇಂದ್ರ ಮಾನೆ ಅವರನ್ನು ‘ಕಾಯಕ ರತ್ನ’ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಗುವುದು.



