‘ದಂಪತಿ ದರ್ಪಣ’ ಗೌರವಕ್ಕೆ ಸುಷ್ಮಾವತಿ-ಡಾ. ಶರಣು ಹೊನ್ನಗೆಜೆ ದಂಪತಿ

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ 13ನೇ ವರ್ಷದ ಸಂಭ್ರಮದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದಲ್ಲಿ ‘ಶರಣತತ್ವ ಚಿಂತನಾ ಸಮಾವೇಶ–ವೈಚಾರಿಕ ವಿಶ್ವದರ್ಶನ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸುಷ್ಮಾವತಿ–ಡಾ. ಶರಣು ಹೊನ್ನಗೆಜೆ ದಂಪತಿಯನ್ನು ಆದರ್ಶ ಶರಣ ದಂಪತಿಗಳೆಂದು ಗುರುತಿಸಿ ‘ದಂಪತಿ ದರ್ಪಣ’ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಹಿರಿಯ ಸಾಹಿತಿ ಡಾ. ಕೆ.ಎಸ್. ನಾಯಕ್ ಅವರು ಸಮಾವೇಶವನ್ನು ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಹಾಗೂ ಪತ್ರಕರ್ತ ಡಾ. ಜಗನ್ನಾಥ ತರನಳ್ಳಿ (ಸೇಡಂ) ಅವರು ದಿಕ್ಸೂಚಿ ನುಡಿ ನೀಡಿದರು.
ಮಹಾನಗರ ಪಾಲಿಕೆಯ ಮಾಜಿ ಮಹಾಪೌರ ವರ್ಷಾ ರಾಜೀವ್ ಜಾನೆ, ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ್ (ಸೇಡಂ), ಹಿರಿಯ ಪತ್ರಕರ್ತ ಕಾಶೀನಾಥ ಗುತ್ತೇದಾರ (ಚಿತ್ತಾಪುರ), ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಸಂಸ್ಥಾಪಕ ಬಿ.ಎಂ. ಪಾಟೀಲ ಕಲ್ಲೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್. ಧನ್ನಿ, ಗೌರವ ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸೈಯದ್ ನಜರುದ್ದೀನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.



