ಕಲಬುರಗಿಜಿಲ್ಲೆ ಸುದ್ದಿ
ಪೋಷಣೆಗೆ ಗೌರವ: ಡಾ. ಜಗನ್ನಾಥ್‌ಗೆ ಗೌರವ ಡಾಕ್ಟರೇಟ್
ಪೌಷ್ಟಿಕತೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಗಮನಾರ್ಹ ಸೇವೆಗೆ ಪ್ರತಿಷ್ಠಿತ ಗೌರವ

ಕಲಬುರಗಿ: ನಗರದ ನ್ಯೂಟ್ರಿಷನ್ ತಜ್ಞ ಡಾ. ಜಗನ್ನಾಥ್ ಅವರಿಗೆ ಯುನೈಟೆಡ್ ಅಮೆರಿಕನ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
ನ್ಯೂಟ್ರಿಷನ್ ಮತ್ತು ವೆಲ್‌ನೆಸ್ ಎಜುಕೇಷನ್ ಕ್ಷೇತ್ರದಲ್ಲಿ ಡಾ. ಜಗನ್ನಾಥ್ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಈ ಕುರಿತು ಡಾ. ಅಭಿನವ ವಾಸವಿ ಅವರು ಪ್ರಸ್ತಾವನೆ ಸಲ್ಲಿಸಿದ್ದರು.
ಪ್ರಸ್ತಾವನೆಯನ್ನು ಪರಿಗಣಿಸಿದ ವಿಶ್ವವಿದ್ಯಾಲಯವು ಇತ್ತೀಚೆಗೆ ಪುದುಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಜಗನ್ನಾಥ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು.
ನ್ಯೂಟ್ರಿಷನ್ ಹಾಗೂ ಆರೋಗ್ಯಕರ ಜೀವನಶೈಲಿ ಕುರಿತು ಜಾಗೃತಿ ಮೂಡಿಸುವಲ್ಲಿ ಡಾ. ಜಗನ್ನಾಥ್ ಅವರ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.



