ಜಿಲ್ಲೆ ಸುದ್ದಿಯಾದಗಿರಿ

110 ಕೆ.ವಿ. ಮಾರ್ಗ ನಿರ್ವಹಣೆ: ಸುರಪುರದಲ್ಲಿ ಸೆ.29ರಂದು ವಿದ್ಯುತ್ ವ್ಯತ್ಯಯ

ಸುರಪುರ, ಸೆ.28: ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ವತಿಯಿಂದ 110 ಕೆ.ವಿ. ವಿದ್ಯುತ್ ಕೇಂದ್ರಗಳ ವ್ಯಾಪ್ತಿಯಲ್ಲಿ ತುರ್ತು ತ್ರೈಮಾಸಿಕ ಮಾರ್ಗ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆ.29ರಂದು (ಮಂಗಳವಾರ) ಸುರಪುರ ಹಾಗೂ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.


ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕೆಂಭಾವಿ, ನಗನೂರು, ಹುಣಸಗಿ, ಗುತ್ತಿ ಬಸವಣ್ಣ, ಕೊಡೇಕಲ್ ಹಾಗೂ ನಾರಾಯಣಪುರ ಮಾರ್ಗಗಳಿಗೆ ಸಂಬಂಧಿಸಿದ 110/33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ ಮಾರ್ಗಗಳು ಹಾಗೂ ಐಪಿಪಿ ಮಾರ್ಗಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳಲಿದೆ.


ಇದಲ್ಲದೆ, ಇಎಚ್‌ಟಿ 110 ಕೆ.ವಿ. ಕೆಬಿಜೆಎನ್‌ಎಲ್ ವ್ಯಾಪ್ತಿಯಲ್ಲಿಯೂ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ. ಈ ಮಾರ್ಗಗಳ ವ್ಯಾಪ್ತಿಯಲ್ಲಿರುವ ವಿವಿಧ ಸೋಲಾರ್ ಘಟಕಗಳು, ಹುಣಸಗಿ ಶುಗರ್ ಲಿಮಿಟೆಡ್ ಸೇರಿದಂತೆ ಸುತ್ತಮುತ್ತಲಿನ ತಾಂಡಾ, ದೊಡ್ಡಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ವಿದ್ಯುತ್ ವ್ಯತ್ಯಯವಾಗಲಿದೆ.


ಸಾರ್ವಜನಿಕರು ಸಹಕರಿಸಲು ಮನವಿ
ಮಾರ್ಗ ನಿರ್ವಹಣಾ ಕಾಮಗಾರಿಯನ್ನು ಸುರಕ್ಷಿತವಾಗಿ ಹಾಗೂ ಶೀಘ್ರವಾಗಿ ಪೂರ್ಣಗೊಳಿಸಲು ನಿಗದಿತ ಅವಧಿಯಲ್ಲಿ ಗ್ರಾಹಕರು ಹಾಗೂ ಸಾರ್ವಜನಿಕರು ಜೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಕಾರ್ಯ ಮತ್ತು ಪಾಲನೆ ವಿಭಾಗ, ಸುರಪುರದ ಕಾರ್ಯನಿರ್ವಾಹಕ ಎಂಜಿನಿಯರ್ (ವಿ) ಮನವಿ ಮಾಡಿದ್ದಾರೆ.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button