ಕಲಬುರಗಿಜಿಲ್ಲೆ ಸುದ್ದಿ

ಚಿತ್ತಾಪುರದಲ್ಲಿ ನಾಳೆ 70ನೇ ಧಮ್ಮ ಜನಜಾಗೃತಿ ಯಾತ್ರೆಗೆ ಅದ್ಧೂರಿ ಸ್ವಾಗತ

ಮಧ್ಯಾಹ್ನ 2ಕ್ಕೆ ಅಂಬೇಡ್ಕರ್ ನಗರದಲ್ಲಿ ಸಮಾರೋಪ ಸಮಾರಂಭ

ಚಿತ್ತಾಪುರ: 70ನೇ ಧಮ್ಮ ದೀಕ್ಷಾ ಮಹಾಸಮಾರಂಭದ ಅಂಗವಾಗಿ ಕರ್ನಾಟಕದಾದ್ಯಂತ ಸಂಚರಿಸುತ್ತಿರುವ ಧಮ್ಮ ಜನಜಾಗೃತಿ ಯಾತ್ರೆಗೆ ಅಕ್ಟೋಬರ್ 31ರಂದು ಚಿತ್ತಾಪುರದಲ್ಲಿ ಭವ್ಯ ಸ್ವಾಗತ ನೀಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬೌದ್ಧ ಸಂಘಟನೆಯ ಮುಖಂಡ ಶ್ರೀಕಾಂತ್ ಶಿಂಧೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ಧಮ್ಮ ಸಂದೇಶ ಸಾರುತ್ತಿರುವ 70ನೇ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ ಶನಿವಾರ ಚಿತ್ತಾಪುರಕ್ಕೆ ಆಗಮಿಸಲಿದೆ. ಯಾತ್ರೆಯನ್ನು ಸ್ವಾಗತಿಸಲು ಬೃಹತ್ ಬೈಕ್ ರ್ಯಾಲಿ ಆಯೋಜಿಸಲಾಗಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಯರಗಲ್ ಕ್ರಾಸ್‌ನಿಂದ ಬೈಕ್ ರ್ಯಾಲಿಶನಿವಾರ ಬೆಳಿಗ್ಗೆ 11 ಗಂಟೆಗೆ ಯರಗಲ್ ಕ್ರಾಸ್‌ನಿಂದ ಬೈಕ್ ರ್ಯಾಲಿ ಆರಂಭವಾಗಲಿದೆ. ಹೋಳಿಕಟ್ಟಾ, ಕಪಡಾ ಬಜಾರ್, ಜನತಾ ಚೌಕ್, ಭುವನೇಶ್ವರಿ ವೃತ್ತ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಂಬೇಡ್ಕರ್ ನಗರ ತಲುಪಲಿದೆ.

ಮಧ್ಯಾಹ್ನ 2ಕ್ಕೆ ಸಮಾರೋಪ ಸಮಾರಂಭನಂತರ ಮಧ್ಯಾಹ್ನ 2 ಗಂಟೆಗೆ ಡಾ.ಬಿ.ಆರ್. ಅಂಬೇಡ್ಕರ್ ನಗರದಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಕಾರ್ಯಕ್ರಮದಲ್ಲಿ ಧಮ್ಮ ದೀಕ್ಷೆಯ ಮಹತ್ವ, ಬುದ್ಧನ ತತ್ವಗಳು ಹಾಗೂ ಬಾಬಾಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಚಿಂತನೆಗಳ ಕುರಿತು ಜಾಗೃತಿ ಮೂಡಿಸಲಾಗುವುದು.

ಧಮ್ಮದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶ ಹೊಂದಿರುವ ಈ ಮಹತ್ವದ ಯಾತ್ರೆಯಲ್ಲಿ ತಾಲ್ಲೂಕು ಹಾಗೂ ಪಟ್ಟಣದ ಬೌದ್ಧ ಬಾಂಧವರು, ಅಂಬೇಡ್ಕರ್ ಅಭಿಮಾನಿಗಳು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀಕಾಂತ್ ಶಿಂಧೆ ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button