ಕಲಬುರಗಿಚಿತ್ರ ಸುದ್ದಿಜಿಲ್ಲೆ ಸುದ್ದಿ

ಕರಾಟೆ ಪರೀಕ್ಷೆಯಲ್ಲಿ ಇಬ್ಬರಿಗೆ ಬ್ಲ್ಯಾಕ್ ಬೆಲ್ಟ್

ಹಲವರಿಗೆ ಕಲರ್ ಬೆಲ್ಟ್, ಕ್ಯಾಂಪ್ ಪ್ರಮಾಣಪತ್ರ ವಿತರಣೆ

ಕಲಬುರಗಿ: ನಗರದ ಹಳೆ ಜೇವರ್ಗಿ ರಸ್ತೆಯ ಗಾಬರೆ ಲೇಔಟ್‌ನಲ್ಲಿರುವ ಕರಾಟೆ ತರಬೇತಿ ಕೇಂದ್ರದಲ್ಲಿ ಕಲೀ-ಎನ್-ರಿಯು ಅಕಾಡೆಮಿ ಆಫ್ ಇಂಡಿಯನ್ ಕರಾಟೆ ಹಾಗೂ ಅಜಯಕುಮಾರ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಕರಾಟೆ ಬ್ಲ್ಯಾಕ್ ಬೆಲ್ಟ್ ಹಾಗೂ ಕಲರ್ ಬೆಲ್ಟ್ ಪರೀಕ್ಷೆ ನಡೆಯಿತು.

ಬೆಂಗಳೂರಿನಿಂದ ಆಗಮಿಸಿದ್ದ ರೆಡ್ ಬೆಲ್ಟ್ ಗ್ರ್ಯಾಂಡ್ ಮಾಸ್ಟರ್ ಶ್ರೀನಿವಾಸ್ ಅವರು ವಿದ್ಯಾರ್ಥಿಗಳ ಕರಾಟೆ ಕೌಶಲ್ಯದ ಪರೀಕ್ಷೆಯನ್ನು ವೀಕ್ಷಿಸಿದರು. ಪರೀಕ್ಷೆಯಲ್ಲಿ ಉತ್ತೀರ್ಣರಾದ ಇಬ್ಬರು ವಿದ್ಯಾರ್ಥಿಗಳಿಗೆ ಬ್ಲ್ಯಾಕ್ ಬೆಲ್ಟ್ ಹಾಗೂ ಹಲವು ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ಮತ್ತು ಕ್ಯಾಂಪ್ ಪ್ರಮಾಣಪತ್ರಗಳನ್ನು ವಿತರಿಸಿದರು.

ವಿದ್ಯಾರ್ಥಿಗಳ ಪರಿಶ್ರಮ, ಶಿಸ್ತು ಹಾಗೂ ಕರಾಟೆ ತರಬೇತಿಯಲ್ಲಿ ತೋರಿದ ಆಸಕ್ತಿಯನ್ನು ಗ್ರ್ಯಾಂಡ್ ಮಾಸ್ಟರ್ ಶ್ರೀನಿವಾಸ್ ಶ್ಲಾಘಿಸಿದರು. ಆತ್ಮರಕ್ಷಣೆ ಜತೆಗೆ ದೈಹಿಕ ಮತ್ತು ಮಾನಸಿಕ ಸದೃಢತೆ ಬೆಳೆಸಿಕೊಳ್ಳಲು ಕರಾಟೆ ತರಬೇತಿ ಸಹಕಾರಿ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಲಕ್ಷ್ಮೀ ದತ್ತಾತ್ರೇಯ ಪಾಟೀಲ ರೇವೂರ ಹಾಗೂ ಶ್ರೀಮತಿ ಸಂಗೀತಾ ಎ. ಪಾಟೀಲ, ಅಕಾಡೆಮಿಕ್ ಡೈರೆಕ್ಟರ್, ಸರ್ವಜ್ಞ ಚಿನ್ನರ ಲೋಕ ಇಂಗ್ಲಿಷ್ ಮೀಡಿಯಂ ಸ್ಕೂಲ್, ಡಿಸ್ಟ್ರಿಕ್ಟ್ ಚೀಫ್ ಕೋಚ್ ರಾಜವರ್ಧನ್ ಜಿ. ಚೌಹಾಣ್, ಶ್ರೀಕಾಂತ್ ಪಿಸಾಳ್, ಪ್ರತಾಪ್ ಸಿಂಗ್ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button