ಜಿಲ್ಲಾಸುದ್ದಿಗಳು

ದಲಿತ ಸಂಘರ್ಷ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಕಲಬುರಗಿ ಜಿಲ್ಲಾ ಶಾಖೆಯ ಸಭೆ ನಗರದ ಐವನ್-ಇ-ಶಾಹಿ ನೂತನ ಅತಿಥಿ ಗೃಹದಲ್ಲಿ ನಡೆಯಿತು. ಸಭೆಯಲ್ಲಿ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ ಮಾತನಾಡಿ, ದಲಿತ ಸಂಘರ್ಷ ಸಮಿತಿಯು ಕಳೆದ ಐದು ದಶಕಗಳಿಂದ ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯ ಆಧಾರದ ಮೇಲೆ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತ ಬಂದಿದೆ ಎಂದು ಹೇಳಿದರು.

ಇಂದಿನ ಯುವಜನರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣವೇ ಸಮಾಜದ ಅಭಿವೃದ್ಧಿ, ಸ್ವಾಭಿಮಾನಿ ಬದುಕು ಹಾಗೂ ಸಾಮಾಜಿಕ ಪರಿವರ್ತನೆಯ ಮೂಲಾಧಾರವಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಾಧನೆಗಾಗಿ ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಸಂಯುಕ್ತ ಸಂಚಾಲಕರಾಗಿ ಶ್ಯಾಮರಾವ ಶಿಂಧೆ ಹಾಗೂ ರಾಣು ಮುದ್ದನಕರ್, ಕಲಬುರಗಿ ಉಪ ವಿಭಾಗದ ಸಂಚಾಲಕರಾಗಿ ವಿಜಯಕುಮಾರ ಶಿಂಧೆ ಅವರನ್ನು ಆಯ್ಕೆ ಮಾಡಲಾಯಿತು.

ಕಲಬುರಗಿ ತಾಲೂಕು ಸಂಚಾಲಕರಾಗಿ ವಿಠಲ ತೆಗನೂರ, ತಾಲೂಕು ಸಹ ಸಂಚಾಲಕರಾಗಿ ರಾಣಪ್ಪ ಮಾಡಬೂಳ ಹಾಗೂ ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜೈಭೀಮ ಬಿಲಗುಂದಿ, ಗುರು ಬೆಳಕೋಟೆ ಮತ್ತು ರಾಜೇಂದ್ರ ದೊಡ್ಡಮನಿ ಅವರನ್ನು ನೇಮಕ ಮಾಡಲಾಯಿತು. ಅವರಾದ (ಬಿ) ಹೋಬಳಿ ಶಾಖೆಯ ಸಂಚಾಲಕರಾಗಿ ಶಿವಶರಣಪ್ಪ ಕಾಂತಾ ಆಯ್ಕೆಯಾದರು.

ಸಭೆಯಲ್ಲಿ ಜಿಲ್ಲಾ ಸಹ ಸಂಚಾಲಕರಾದ ಶಿವಕುಮಾರ ಆಜಾದಪೂರ, ವಿಜಯಕುಮಾರ ಟೈಗರ್, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಮಡಿವಾಳಪ್ಪ ಕಟ್ಟಿಮನಿ, ದಲಿತ ಮಹಿಳಾ ಘಟಕದ ಸಂಚಾಲಕರಾದ ಸವಿತಾ ಆರ್., ಜ್ಯೋತಿ ಕಾಂಬಳೆ, ಮಾಯಾದೇವಿ ಬಂಡಾರಿ, ಸರುಬಾಯಿ ಯಳಸಂಗಿ, ನಗರ ಸಂಚಾಲಕರಾದ ಅಭಿಷೇಕ್ ಉಪಾಧ್ಯಾಯ, ಗೌತಮ ಉಪಾಧ್ಯಾಯ, ಸಹದೇವ ನಂದೂರ್, ಅರುಣಕುಮಾರ ಇನಾಮದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಕುರಿತು ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ, ಜಿಲ್ಲಾ ಸಹ ಸಂಚಾಲಕ ರಾಣು ಮುದ್ದನಕರ್ ಹಾಗೂ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಮಡಿವಾಳಪ್ಪ ಕಟ್ಟಿಮನಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button