ಚಿತ್ರ ಸುದ್ದಿ

ಜೆಡಿಎಸ್ ಕಚೇರಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಕಲಬುರಗಿ: ನಗರದ ಜಿಲ್ಲಾ ಜೆಡಿಎಸ್ ಕಚೇರಿ ಆವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.

ಸೇವಾದಳದ ಜಿಲ್ಲಾಧ್ಯಕ್ಷ ನರಸಯ್ಯ ಗುತ್ತೇದಾರ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಅಶೋಕ ಗುತ್ತೇದಾರ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನ ಹಾಗೂ ದೇಶಪ್ರೇಮವನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ದೇಶದ ಏಕತೆ, ಅಖಂಡತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಲು ಎಲ್ಲರೂ ಬದ್ಧರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾಪ್ರಧಾನ ಕಾರ್ಯದರ್ಶಿ ಬಸವರಾಜ್ ಬೀರಬಿಟ್ಟೆ, ಮಹಾನಗರ ಪಾಲಿಕೆ ಸದಸ್ಯರಾದ ಅಲೀಮ್ ಪಟೇಲ್ ಕ್ಯೂ.ಪಿ., ಕೃಷ್ಣ ರೆಡ್ಡಿ, ಕಾರ್ಯಾಧ್ಯಕ್ಷ ರಾಮಚಂದ್ರ ಅಟ್ಟೂರ್, ಹಿರಿಯ ಉಪಾಧ್ಯಕ್ಷರಾದ ಮಹಾಂತಪ್ಪ ಮದರಿ, ಶಂಕರಗೌಡ ಪಾಟೀಲ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಲಸಲ್ ಕುಮಾರ್, ಮಲ್ಲಿಕಾರ್ಜುನ ಸಂಗಣಿ, ಹೇಮಂತ್ ಶಹಾ, ಪ್ರವೀಣ್ ಜಾಧವ್, ಬಾಬರ್ ಮುಸ್ತಫಾ, ಗಂಗಾಧರ್ ಪಂಚಾಳ್, ಬೈಲಪ್ಪ ಪಟ್ಟೇದಾರ್, ಮಾಣಿಕ್ ಶಾಪೂರಕರ್, ದೇವಿಂದ್ರ ಹಸನಪುರ, ಶಿವಲಿಂಗಪ್ಪ ಪಾಟೀಲ್, ಹೋಬಸಿಂಗ್ ಚವಾಣ್, ಮಾರುತಿ ಚವಾಣ್, ಮುಸ್ತಾಕ್ ಅಲಿ, ಬಸವರಾಜ್ ಪಾಟೀಲ್, ಚಂದ್ರು ಮೋರೆ, ಬಸರೆಡ್ಡಿ ಚಿತ್ತಾಪುರ, ಸುನಿಲ್ ಗಜರೆ, ಹಣಮಂತ ಕಂದಳ್ಳಿ, ಅನ್ವರ್ ಪಟೇಲ್, ಹಣಮಂತ ಸನಗುಂದಿ, ಬಸವರಾಜ್ ಸಿದ್ರಾಮಗೋಳ್, ಖಾಜಾ ಪಟೇಲ್, ಕಿಶನ್, ಗೋಪಾಲ್ ಗುತ್ತೇದಾರ, ಯೇಸುನಾಥ್, ನಾಗಯ್ಯ ಸ್ವಾಮಿ, ಮೊಹಮ್ಮದ್ ಪಟೇಲ್, ಪ್ರವೀಣ್ ದೊಡ್ಡಮನಿ, ಕೈಲಾಸಪತಿ, ಶ್ರೀನಿವಾಸ್ ಜಮಾದಾರ್, ಸಿದ್ದು ಪೂಜಾರಿ, ಮಹಾನಂದ ಪಡಶೆಟ್ಟಿ, ಸುನೀತಾ ಕೋರವಾರ, ಅನುರಾಧ, ವಿಜಯಾ, ನಿರ್ಮಲಾ ಬಿರಾದಾರ್, ಮಹಾದೇವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button