ಲೇಖನಗಳು

ಪ್ರತಿಭೆಗೆ ಪ್ರೋತ್ಸಾಹ: ಡಿ.ಕೆ. ಸೌಹಾರ್ದ ಸಂಘದ 5ನೇ ವಾರ್ಷಿಕ ಸಭೆ

ಕಲಬುರಗಿ: ಡಿ.ಕೆ. ಸೌಹಾರ್ದ ಸಹಕಾರಿ ನಿಯಮಿತದ 5ನೇ ವರ್ಷದ ಸಾಮಾನ್ಯ ಸಭೆ ನಗರದದಲ್ಲಿ ಸಂಭ್ರಮದಿಂದ ನಡೆಯಿತು. ಸಭೆಯಲ್ಲಿ ಸಂಘದ ವಿವಿಧ ಚಟುವಟಿಕೆಗಳು, ಸಾಧನೆಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು.

ಸಂಜು ಮಹಾಜನ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಚಂದ್ರಶೇಖರ ರೇಡ್ಡಿ ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ ಶರಣಗೌಡ ಎಸ್. ನಾಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಸಭೆಯ ಅಂಗವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಿದ ಗಣ್ಯರು, ಮುಂದಿನ ದಿನಗಳಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಹಾರೈಸಿದರು.

ಸಂಘದ ಅಭಿವೃದ್ಧಿಗೆ ಉತ್ತಮವಾಗಿ ಸೇವೆ ಸಲ್ಲಿಸಿದ ಹಾಗೂ ಅತಿ ಹೆಚ್ಚು ಸದಸ್ಯರನ್ನು ಸೇರ್ಪಡೆಗೊಳಿಸಿದ ನಿರ್ದೇಶಕರನ್ನು ಸಹ ಗೌರವಿಸಲಾಯಿತು. ಸಂಘಕ್ಕೆ ಹೆಚ್ಚಿನ ಸದಸ್ಯರು ಹಾಗೂ ಷೇರುದಾರರನ್ನು ಸೇರ್ಪಡೆಗೊಳಿಸುವಲ್ಲಿ ವಿಶೇಷ ಸಾಧನೆ ಮಾಡಿದವರಿಗೂ ಸನ್ಮಾನ ನೆರವೇರಿಸಲಾಯಿತು.

ಉಪಾಧ್ಯಕ್ಷ ಬಾಬುರಾವ ಹೆಚ್. ಕುಲಕರ್ಣಿ, ನಿರ್ದೇಶಕರಾದ ಗೌಡಪ್ಪಗೌಡ ಬಿ. ಪಾಟೀಲ, ಡಾ. ಅಮರೇಶ ಎಸ್. ಕೋಳಕೂರ, ಡಾ. ಅಣ್ಣಾರಾವ ಎಸ್. ಪಾಟೀಲ, ಅನುರಾಧಾ ಎಸ್. ಪಾಟೀಲ, ಚಂದ್ರಲೇಖಾ ಎಸ್., ದೇವಿಂದ್ರಪ್ಪ ಆರ್. ತಂಗಡಗಿ, ಪದ್ಮಾವತಿ ಎಸ್. ರೆಡ್ಡಿ, ರೋಹಿಣಿ ಎಸ್. ಸಾರವಾಡ, ಸಂದೀಪಕುಮಾರ ಎಂ.ಕೆ., ಉಮೇಶಬಾಬು ಆರ್. ಪಾಟೀಲ, ವಿಜಯಲಕ್ಷ್ಮೀ ಎಸ್. ಜಮಾದಾರ ಸೇರಿದಂತೆ ಸಂಘದ ಪದಾಧಿಕಾರಿಗಳು, ಸಿಬ್ಬಂದಿ, ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಹಕಾರಿ ಕ್ಷೇತ್ರದ ಬೆಳವಣಿಗೆಯ ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ಸಿಬ್ಬಂದಿಯ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಾಮಾನ್ಯ ಸಭೆ ಅರ್ಥಪೂರ್ಣವಾಗಿ ನಡೆಯಿತು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button